ಅಜ್ಜಂಪೀರ್ ಖಾದ್ರಿಯವರನ್ನು ಸ್ಪರ್ಧೆಯಿಂದ ಹಿಂದೆ ಸರಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ನಾಮಪತ್ರ ಸಲ್ಲಿಸಿದ ದಿನದಿಂದ ಖಾದ್ರಿಯನ್ನು ಸಚಿವ ಜಮೀರ್ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿದ್ದರು. ಖಾದ್ರಿ ನಾಮಪತ್ರ ಹಿಂಪಡೆಯದಿದ್ದರೆ ಎನ್ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಸುಲಭ ಜಯ ಸಾಧಿಸುತ್ತಿದ್ದರು.