‘ಸಪ್ತ ಸಾಗರಾದಾಚೆ ಎಲ್ಲೋ’ ನಿರ್ದೇಶಕ ಹೇಮಂತ್ ರಾವ್ ಅವರಲ್ಲಿ ರಕ್ಷಿತ್ಗೆ ಇಷ್ಟವಾಗಿದ್ದೇನು?

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ. ಈ ಚಿತ್ರ ಸೆಪ್ಟೆಂಬರ್ 1ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ದೇಶಕರ ಬಗ್ಗೆ ರಕ್ಷಿತ್ ಮಾತನಾಡಿದ್ದಾರೆ. ‘ನಾನು ಹೈಲೈಟ್ ಆಗಬೇಕು, ಹಣ ಮಾಡಬೇಕು ಎಂಬುದು ಕೆಲವು ನಿರ್ದೇಶಕರಿಗೆ ಇರುತ್ತದೆ. ಆದರೆ ಪ್ರಬುದ್ಧ ನಿರ್ದೇಶಕ ಸಿನಿಮಾ ಮೊದಲು ಆಮೇಲೆ ನಾನು ಎನ್ನುವ ಮನಸ್ಥಿತಿಯಲ್ಲಿ ಇರುತ್ತಾನೆ. ಹೇಮಂತ್ ರಾವ್ ಎರಡನೇ ಸಾಲಿಗೆ ಸೇರುತ್ತಾರೆ’ ಎಂದು ಹೇಮಂತ್ ಬಗ್ಗೆ ರಕ್ಷಿತ್ ಹೆಮ್ಮೆ ವ್ಯಕ್ತಪಡಿಸಿದರು.