ದೇವಸ್ಥಾನದ ಮುಂಭಾಗದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತಿದ್ದಾಗ ಪ್ರಧಾನ ಅರ್ಚಕರು ರಥದ ಗೋಪುರದಲ್ಲಿ ಕುಳಿತಿದ್ದರು. ಅವರು ಗೋಪುರದೊಂದಿಗೆ ನೆಲಕ್ಕೆ ಬಿದ್ದಿದ್ದು ನಿಜವಾದರೂ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ರಥಧ ಮುಂಭಾಗದ ಚಕ್ರಗಳನ್ನು ಹಿಂಭಾಗದ ಚಕ್ರಗಳ ಜತೆ ಸಂಪರ್ಕ ಕಲ್ಪಿಸುವ ಌಕ್ಸೆಲ್ ಕಟ್ಟಾಗಿದ್ದರಿಂದ ಅವಘಡ ಸಂಭವಿಸಿದೆ. ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಅಂತಲೂ ಹೇಳುತ್ತಾರೆ.