‘ಸೆಲೆಬ್ರಿಟಿಗಳಿಗೆ ಬೇರೆ ನ್ಯಾಯಾನಾ? ಅಪಘಾತ ಮಾಡಿ ಸಾಯಿಸಿದ ಆ ನಟನನ್ನು ಜೈಲಿಗೆ ಹಾಕಿ’: ಪುತ್ರನ ಅಳಲು

ನಟ ನಾಗಭೂಷಣ್ ಅವರ ಕಾರು ಅಪಘಾತದಿಂದ ಪಾದಚಾರಿ ಪ್ರೇಮಾ ಎಸ್​. ಮೃತಪಟ್ಟಿದ್ದಾರೆ. ಪ್ರೇಮಾ ಪತಿ ಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ. ತಾಯಿಯನ್ನು ಕಳೆದುಕೊಂಡು ಪ್ರೇಮಾ ಅವರ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಮಾಧ್ಯಮಗಳ ಎದುರಿನಲ್ಲಿ ಪುತ್ರ ಪಾರ್ಥ ಹೇಳಿಕೆ ನೀಡಿದ್ದಾರೆ. ‘ಅಪಘಾತ ಮಾಡಿದ್ದು ಒಬ್ಬ ನಟ ಅಂತ ಹೇಳ್ತಾ ಇದ್ದಾರೆ. ಅದು ನಮಗೆ ಬೇಕಿಲ್ಲ. ನಮಗೆ ನ್ಯಾಯ ಬೇಕು. ನಾವು ತಪ್ಪು ಮಾಡಿದರೆ ನಮ್ಮನ್ನು ಜೈಲಿಗೆ ಹಾಕ್ತೀರಿ ಅಲ್ವಾ? ಆ ವ್ಯಕ್ತಿಯನ್ನೂ ಜೈಲಿಗೆ ಹಾಕಿ. ಸೆಲೆಬ್ರಿಟಿಗಳಿಗೆ ಬೇರೆ ರೂಲ್ಸ್​ ಇದೆಯಾ? ಒಬ್ಬರನ್ನು ಸಾಯಿಸಿದ ತಪ್ಪಿಗೆ ಏನು ಶಿಕ್ಷೆ ಆಗುತ್ತಲ್ಲ ಅದೇ ರೀತಿ ಈ ನಟನಿಗೆ ಜೈಲು ಶಿಕ್ಷೆ ಆಗಬೇಕು. ನಮಗೆ ಪರಿಹಾರ ಬೇಕಿಲ್ಲ. ದುಡ್ಡಿಗಾಗಿ ನಾವು ಬಂದಿಲ್ಲ. ಕಷ್ಟದಲ್ಲಿ ಬೆಳೆದ ನಮಗೆ ದುಡಿಯುವುದು ಗೊತ್ತಿದೆ’ ಎಂದು ಪಾರ್ಥ ಅವರು ಅಳಲು ತೋಡಿಕೊಂಡಿದ್ದಾರೆ.