ನಟ ಧ್ರುವ ಸರ್ಜಾ ಅವರು ಇಂದು (ಅಕ್ಟೋಬರ್ 6) ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅ.5ರ ಮಧ್ಯರಾತ್ರಿಯಿಂದಲೇ ಸೆಲೆಬ್ರೇಷನ್ ಶುರುವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ಧ್ರುವ ಸರ್ಜಾಗೆ ಶುಭಾಶಯ ತಿಳಿಸಿದ್ದಾರೆ. ಹಾರ, ಕೇಕ್ ಬದಲಿಗೆ ಬಡ ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಬುಕ್, ಪೆನ್ನು, ಬ್ಯಾಗ್ಗಳನ್ನು ಉಡುಗೊರೆ ರೂಪದಲ್ಲಿ ನೀಡುವಂತೆ ಅಭಿಮಾನಿಗಳಲ್ಲಿ ಧ್ರುವ ಮನವಿ ಮಾಡಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅನೇಕ ಫ್ಯಾನ್ಸ್ ನಡೆದುಕೊಂಡಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳ ಜೊತೆ ನಿಂತು ಧ್ರುವ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆದುಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇಂದು ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಸಿನಿಮಾ ಬಿಡುಗಡೆ ಆಗಿದೆ. ಆ ಖುಷಿ ಕೂಡ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಇದೆ.