ವಿದ್ಯುತ್​​​ ಪೂರೈಕೆ ವ್ಯತ್ಯಯ.. ಗದಗ-ಬಾಗಲಕೋಟೆ ರೈತರ ಆಕ್ರೋಶ

ಸಮರ್ಪಕ ವಿದ್ಯುತ್ ಪೂರೈಕೆ ಮಾಡದಕ್ಕೆ ರಾತ್ರೋರಾತ್ರಿ ವಿದ್ಯುತ್ ಪ್ರಸರಣ ಘಟಕಕ್ಕೆ ರೈತರು ಮುತ್ತಿಗೆ ಹಾಕಿದ್ರು. ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ಹೆಸ್ಕಾಂ ಘಟಕದ (HESCOM) ಕಚೇರಿಗೆ ಮುತ್ತಿಗೆ ಹಾಕಿದ್ರು. ಹರದಗಟ್ಟಿ, ಮಂಜಲಾಪುರ, ಅಡರಕಟ್ಟಿ ಗ್ರಾಮಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದ ರೈತರು (Farmers) ಕಂಗಾಲಾಗಿದ್ರು. ನಿನ್ನೆ ಬುಧವಾರ ವಿದ್ಯುತ್​​​​ ಘಟಕಕ್ಕೆ ಮುತ್ತಿಗೆ ಹಾಕಿ, ನಮಗೆ ಸಮರ್ಪಕ ವಿದ್ಯುತ್ ಕೊಡಿ (Power shortage) ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ನಮಗೆ ಕೊಡದಿದ್ದರೇ, ಕೈಗಾರಿಕೆಗೆಗಳಿಗೂ ವಿದ್ಯುತ್ ಕೊಡಬೇಡಿ. ಮಳೆಯಾಗದೆ ಬೋರ್​​ವೆಲ್​ ನೀರೇ ಗತಿಯಾಗಿದ್ದು ಬೋರ್​ವೆಲ್​ ಓಡಿಸಲು ಕರೆಂಟ್​ ಅಗತ್ಯವಾಗಿದೆ ಎಂದು ರೈತರು ಆಗ್ರಹಿಸಿದರು.