ಎಫ್ಐಅರ್​ನಲ್ಲಿ ಹೆಸರಿರುವ ಕಾರಣ ಶಾಸಕನ ವಿಚಾರಣೆ ನಡೆಯಲಿದೆ: ಪರಮೇಶ್ವರ್

ಭೈರತಿ ಬಸವರಾಜ ಹೆಸರು ಸುಖಾಸುಮ್ಮನೆ ಕೊಲೆ ಪ್ರಕರಣದಲ್ಲಿ ಎಳೆತರಲಾಗುತ್ತಿದೆ, ಇದೊಂದು ಷಡ್ಯಂತ್ರ ಅಂತ ಬಿಜೆಪಿ ನಾಯಕರು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ದೂಷಿಸುವುದು ಹೊಸದೇನಲ್ಲ, ಆದರೆ ಪೊಲೀಸರು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡುತ್ತಾರೆ, ವಿಚಾರಣೆಯಲ್ಲಿ ಯಾರೆಲ್ಲ ತಪ್ಪಿತಸ್ಥರು ಅಂತ ಗೊತ್ತಾಗುತ್ತದೆ ಎಂದರು.