ಸ್ಥಳೀಯ ಬಿಜೆಪಿ ಮುಖಂಡ ರುದ್ರಮುನಿಸ್ವಾಮಿಗೆ ಸೇರಿದ ಮನೆಯಲ್ಲಿ ದುರಂತ

ಮೊದಲು ವರದಿಯಾದಂತೆ ರುದ್ರಮುನಿಯವರ ಮನೆಯಲ್ಲಿ ಅಗ್ನಿ ದುರಂತ ಯುಪಿಎಸ್ ಸ್ಫೋಟಗೊಂಡು ಸಂಭವಿಸಿಲ್ಲ, ಮನೆಯ ಹಾಲ್​ನಲ್ಲಿದ್ದ ಫಿಶ್ ಅಕ್ವೇರಿಯಂ ಬಳಿ ಶಾಟ್ ಸರ್ಕ್ಯೂಟ್ ಆಗಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಹಾಲ್​​ನಲ್ಲಿದ್ದ ಸೋಫಾ ಮತ್ತು ಇತರ ವಸ್ತುಗಳು ಬೆಂಕಿಗಾಹುತಿಯಾಗಿವೆ. ರುದ್ರಮುನಿ ಕೂಡಲೇ ಅಗ್ನಿಶಾಮಕ ದಳ ಕಚೇರಿಗೆ ಫೋನ್ ಮಾಡಿದರೂ ಸಿಬ್ಬಂದಿ ಬರುವಷ್ಟರಲ್ಲಿ ಸಾಕಷ್ಟು ಹಾನಿಯುಂಟಾಗಿದೆ.