ಛತ್ತೀಸ್‌ಗಢದ ರಾಯಗಢದಲ್ಲಿ ಟ್ರಾಫಿಕ್ನಿಂದ ತುಂಬಿದ್ದ ರಸ್ತೆಯಲ್ಲಿ ಕರುವೊಂದು ಬಿದ್ದಿತ್ತು. ಆ ಕರುವಿನ ಮೇಲೆ ಕಾರು ಹರಿದು ಹೋಯಿತು. ಆ ಕರುವನ್ನು ಕಾಪಾಡಲು ಬಂದ ಹಸುಗಳು ಕಾರನ್ನು ಅಡ್ಡ ಹಾಕಿವೆ. ಬಳಿಕ ಅಕ್ಕಪಕ್ಕದಲ್ಲಿ ಸೇರಿದ ಜನರು ಕಾರಿನಡಿ ಸಿಲುಕಿದ್ದ ಕರುವನ್ನು ಹೊರಗೆ ಎಳೆದು, ಅದನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.