ಅಮರನಾಥ ಯಾತ್ರಿಕರ ಮೊದಲ ತಂಡವು ಬಾಲ್ಟಾಲ್ ಮತ್ತು ನುನ್ವಾನ್‌ನಲ್ಲಿರುವ ಅವಳಿ ಮೂಲ ಶಿಬಿರಗಳಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3880 ಮೀಟರ್ ಎತ್ತರದ ಗುಹಾ ದೇವಾಲಯದ ಕಡೆಗೆ ಹೊರಟಿತು. ಇದು ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವನ್ನು ಹೊಂದಿರುವ ಗುಹೆಯಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಗಾಮ್‌ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನ ಸೋನಾಮಾರ್ಗ್ ಪ್ರದೇಶದ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಪುರುಷರು, ಮಹಿಳೆಯರು ಮತ್ತು ಸಾಧುಗಳು ಸೇರಿದಂತೆ ಯಾತ್ರಿಕರ ಗುಂಪುಗಳು ಬೆಳಗಿನ ಜಾವವೇ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಿಕರು ಇಂದು ಮಧ್ಯಾಹ್ನ ಕಾಶ್ಮೀರ ಕಣಿವೆಯನ್ನು ತಲುಪಿದರು. ಅವರಿಗೆ ಆಡಳಿತ ಮತ್ತು ಸ್ಥಳೀಯರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿತು.