ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!

ಅಸಲಿಗೆ ದೆಹಲಿ ಪ್ರವಾಸಕ್ಕೆ ಕೇವಲ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಾತ್ರ ಹೋಗಿಲ್ಲ, ಮಂತ್ರಿ ಮತ್ತು ಶಾಸಕರ ಪಟಾಲಂ ಕೂಡ ಅವರ ಜೊತೆಯಿದೆ. ಸಚಿವರಾದ ಕೆಜೆ ಜಾರ್ಜ್, ಭೈರತಿ ಸುರೇಶ್, ಮುಖ್ಯ ಸಚೇತಕ ಅಶೋಕ ಪಟ್ಟಣ್, ಶಾಸಕರಾದ ಎನ್​ಎ ಹ್ಯಾರಿಸ್, ಟಿಬಿ ಜಯಚಂದ್ರ, ಹಂಪನಗೌಡ ಬಾದರ್ಲಿ ಮೊದಲಾದವರು ದೆಹಲಿಯಲ್ಲಿದ್ದಾರೆ. ಇವರಲ್ಲಿ ಸ್ವಂತ ಖರ್ಚಿನಲ್ಲಿ ಹೋದವರು ಎಷ್ಟು ಜನವೋ?