ಆಕ್ಸಿಯಮ್ ಸ್ಪೇಸ್‌ನ ಆಕ್ಸ್ -4 ಕಾರ್ಯಕ್ರಮದ ಭಾಗವಾಗಿದ್ದ 18 ದಿನಗಳ ವಿಸ್ತೃತ ಕಾರ್ಯಾಚರಣೆಯ ನಂತರ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಭೂಮಿಗೆ ಮರಳಿದ್ದಾರೆ. ಅವರು ಇಂದು ಮಧ್ಯಾಹ್ನ 3 ಗಂಟೆಗೆ ಭಾರತೀಯ ಕಾಲಮಾನ ಪ್ರಕಾರ ಕ್ಯಾಲಿಫೋರ್ನಿಯಾ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿರುವ ಇತರ ಮೂವರು ಗಗನಯಾತ್ರಿಗಳೊಂದಿಗೆ ಇಳಿದಿದ್ದಾರೆ. ಇದೀಗ ಅವರನ್ನು ಡ್ರ್ಯಾಗನ್ ಕ್ಯಾಪ್ಸುಲ್ನಿಂದ ಹೊರಗೆ ಕರೆತರಲಾಗಿದೆ.