ಶಿವಾಜಿನಗರದಲ್ಲಿ ಇಂದು ನಡೆದ ವಿಘ್ನೇಶ್ವರನ ಪ್ರತಿಷ್ಠಾಪನೆಯಲ್ಲಿ ಹಿಂದೂ ಮುಸಲ್ಮಾನರಲ್ಲದೆ ಬೇರೆ ಧರ್ಮಗಳ ಜನ ಸಹ ಸೇರಿದ್ದರು. ಪಾರ್ಸಿ ಧರ್ಮ ಮತ್ತು ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನೂ ಇಲ್ಲಿ ನೋಡಬಹುದು. ಗಣೇಶ ಚತುರ್ಥಿ ಹಬ್ಬ ಸರ್ವಧರ್ಮಗಳ ಸಮಾಗಮಕ್ಕೆ ವೇದಿಕೆಯಾಗಿದ್ದು ಕನ್ನಡಿಗರಿಗೆ ಅನಂದ ಉಂಟು ಮಾಡಿರುವುದರಲ್ಲಿ ಸಂಶಯವಿಲ್ಲ.