ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!

ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದೇನೋ ನಿಜ. ಆದರೆ, ಚಾಲಕರ ನಿರ್ಲಕ್ಷದಿಂದ ಅಲ್ಲೊಂದು ಇಲ್ಲೊಂದು ಎಂಬಂತೆ ಅಪಘಾತಗಳು ಸಂಭವಿಸುತ್ತದೆ. ರಾಮನಗರ ಬಳಿ ಭಾನುವಾರ ಭೀಕರ ಅಪಘಾತ ಸಂಭವಿಸಿದ್ದು, ಒಂದು ಕಾರು ಇನ್ನೊಂದು ಕಾರಿನ ಮೇಲೆ ಏರಿದೆ. ಅದೃಷ್ಟವಶಾತ್, ಭಾರಿ ಅನಾಹುತ ತಪ್ಪಿದೆ.