ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ: ಖ್ಯಾತ ನಟ ದಿವಂಗತ ವಿಷ್ಣುವರ್ಧನ್ ರೊಂದಿಗೆ ದ್ವಾರಕೀಶ್ ಸ್ನೇಹ ಹಲವಾರು ಸೂಪರ ಹಿಟ್ ಸಿನಿಮಾಗಳಿಗೆ ಕಾರಣವಾಗಿತ್ತು. ಒಂದು ಜಮಾನಾದಲ್ಲಿ ವಿಷ್ಣು ಅವರಿಗೆ ಗಾಡ್ ಫಾದರ್ ನಂತಿದ್ದ ದ್ವಾರಕೀಶ್ ಅದ್ಯಾವುದೋ ಕಾರಣಕ್ಕೆ ಮುನಿಸಿಕೊಂಡು ದೂರವಾಗಿದ್ದರು. ಅದರೆ, ಕೆಲ ವರ್ಷಗಳ ನಂತರ ಅವರ ನಡುವಿನ ಮುನಿಸು ಮರೆಯಾಗಿ ಸ್ನೇಹದ ಎರಡನೇ ಇನ್ನಿಂಗ್ಸ್ ನಲ್ಲೂ ಬಾಕ್ಸಾಫೀಸನ್ನು ಕೊಳ್ಳೆಹೊಡೆದ ಸಿನಿಮಾಗಳು ಬಂದಿದ್ದವು.