ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಜನಿವಾರ ಧರಿಸಬಾದು ಅಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿಲ್ಲ, ವೆಬ್ಸೈಟ್ನಲ್ಲಿ ಅದನ್ನು ಪರಿಶೀಲಿಸಬಹುದು, ಸಿಇಟಿಯ ಉಸ್ತುವಾರಿಯನ್ನು 20,000 ಶಿಕ್ಷಕರಿಗೆ ವಹಿಸಲಾಗಿತ್ತು, ಅದರೆ ಕಾಲೇಜಿನ ಮುಖ್ಯದ್ವಾರದ ಬಳಿಯ ಒಬ್ಬ ಸಿಬ್ಬಂದಿಯಿಂದ ಉಳಿದವರೆಲ್ಲ ನೋವು ಅನುಭವಿಸುತ್ತಿದ್ದಾರೆ, ಅಚಾತುರ್ಯ ನಡೆದಿದ್ದೇಯಾದರೆ ಪ್ರಾಧಿಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ತಾನು ಬ್ರಾಹ್ಮಣ ಸಮಾಜದ ಕ್ಷಮೆ ಕೋರುವುದಾಗಿ ಪ್ರಸನ್ನ ಹೇಳಿದರು.