ಡಿಕೆ ಶಿವಕುಮಾರ್ ಪಿತೂರಿ ಮಾಡಿ, ತೇಜೋವಧಿ ಮಾಡಿ ಒಕ್ಕಲಿಗರ ನಾಯಕತ್ವ ಪಡೆಯಲು ಆಗುವುದಿಲ್ಲ. ಅದನ್ನು ಜನರು ಕೊಡಬೇಕು. ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಎಂಎಲ್ಸಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪಿತೂರಿ ಮಾಡಿದ್ದಾರೆಂದು ಆರೋಪಿಸಿರುವ ಸಿಪಿ ಯೋಗೇಶ್ವರ್, ಡಿಕೆಶಿಗೆ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.