ಬೆಂಗಳೂರು/ಚಿತ್ರದುರ್ಗ/ ದಾವಣಗೆರೆ: ರಾಜ್ಯಾದ್ಯಂತ ನಾನಾ ಕಡೆ ಕಡು ಭ್ರಷ್ಟರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮಹೇಶ್, ಪತ್ನಿ BBMP ಎಇ ಹೆಚ್.ಭಾರತಿ ಮನೆ ಮೇಲೆಯೂ ದಾಳಿ ನಡೆದಿದೆ. ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿಯೂ ಲೋಕಾಯುಕ್ತ ಬೇಟೆ ನಡೆದಿದೆ. ಆ ವೇಳೆ ಕುಟುಂಬ ಸದಸ್ಯರು ಆಸ್ತಿ ಪತ್ರ ಹಾಗೂ ಕಾರ್ ಕೀ ಗಳನ್ನ ಹೊರ ಎಸೆದಿರುವ ಘಟನೆಯೂ ನಡೆದಿದೆ. ಆದರೂ ಮನೆ ಸುತ್ತಾಡಿದ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಮೂರು ಕಡೆ ಅಡಿಕೆ ತೋಟ, ಒಂದು ಕೆಜಿ ಚಿನ್ನ ಹಾಗೂ 15 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಆದಾಯಕಿಂತ ಒಂದು ಕೋಟಿ, 38 ಲಕ್ಷ 10 ಸಾವಿರ ರೂಪಾಯಿ ಹೆಚ್ಚುವರಿ ಆಸ್ತಿ ಗಳಿಕೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಂದರೆ ಸುಮಾರು ಶೇ.185 ರಷ್ಟು ಆದಾಯ ಗಳಿಕೆಯಾಗಿದೆ.