ಬಿಜೆಪಿ ಕಚೇರಿಯಲ್ಲಿ ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂತರ ನಿಖಿಲ್ ಕುಮಾರಸ್ವಾಮಿಯ ಖದರು ಬೇರೆಯಾಗಿದೆ. ಚುನಾವಣಾ ರಾಜಕೀಯದಲ್ಲಿ ಅವರ ಸಾಧನೆಯೇನೂ ಇಲ್ಲ ಅದರೆ ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಹೈವೋಲ್ಟೇಜ್ ಮತ್ತು ಪ್ರತಿಷ್ಠೆಯ ಕಾಳಗವಾಗಿರುವುದರಿಂದ ಜನ ನಿಖಿಲ್ ರನ್ನು ನೋಡುವ ದೃಷ್ಟಿಕೋನ ಬದಲಾಗಿದೆ.