20 ಸೆಕೆಂಡ್​ಗಳಲ್ಲಿ ಅಂಗಡಿ ಬಾಗಿಲು ಮುರಿದು ಕಳ್ಳತನ

ಫೆಬ್ರವರಿ 16ರ ಮಧ್ಯರಾತ್ರಿ ಮುಸುಕುಧಾರಿ ಗ್ಯಾಂಗ್ ಗದಗ-ಬೆಟಗೇರಿ ಅವಳಿ ನಗರಗಳ 8 ಅಂಗಡಿಗಳಿಗೆ ಕನ್ನ ಹಾಕಿದೆ. 6 ಕಳ್ಳರ ಗ್ಯಾಂಗ್​ ಇದಾಗಿದೆ. ಪೊಲೀಸ್​​ ಸೆಕ್ಯೂರಿಟಿ ಇದ್ದರೂ ಕೃತ್ಯವೆಸಗಿದೆ. ಬಡಾವಣೆ ಠಾಣೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ರಾತ್ರಿ ರೌಂಡ್ಸ್ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.