ಇದು ಅದ್ಭುತ ಆಟೋ ರಿಕ್ಷಾ ರೇಸ್.. ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಎಲ್ಲರ ಗಮನ ಸೆಳೆಯಿತು. ಈ ವಿಡಿಯೋ ಆಟೋರಿಕ್ಷಾ ರೇಸ್​​ ಕುರಿತದ್ದಾಗಿದೆ. ವಿಡಿಯೋದಲ್ಲಿ ಆಟೋರಿಕ್ಷಾದ ವೇಗ ನೋಡಿದರೆ ನೀವೂ ಬೆಚ್ಚಿ ಬೀಳುತ್ತೀರಿ. ಈ ವಿಡಿಯೋಗೆ ನೆಟಿಜನ್‌ಗಳಿಂದ ಹಲವು ತಮಾಷೆಯ ಕಾಮೆಂಟ್‌ಗಳು ಕೂಡ ಬಂದಿವೆ. ಆಟೋ ಜಿಪಿ ಎಂದು ವಿಡಿಯೋದಲ್ಲಿ ಬರೆಯಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೊದಲಿಗೆ ರೇಸಿಂಗ್ ಮಾರ್ಕ್ ನಲ್ಲಿ ಮೂರು ಆಟೋಗಳು ಸಾಲಾಗಿ ನಿಂತಿರುವುದನ್ನು ವಿಡಿಯೋದಲ್ಲಿ (Viral Video) ನೋಡಬಹುದಾಗಿದೆ. ಆದರೆ, ದೆಹಲಿಯಲ್ಲಿ ಈ ರೇಸ್ ನಲ್ಲಿ ಗೆದ್ದವರು ಯಾರು ಎಂಬುದು ಗೊತ್ತಾಗಿಲ್ಲ.. ಆದರೆ, ಆಟೋ ರೇಸಿಂಗ್ ಮಾತ್ರ ಎಲ್ಲರ ಮನಸೆಳೆಯುತ್ತಿದೆ. ದೆಹಲಿಯ ಕೆಲವು ಆಟೋ ವಾಲಾಗಳು ಮೂರು ಆಟೋಗಳೊಂದಿಗೆ ರೇಸಿಂಗ್ (Autorickshaw Race) ಆಯೋಜಿಸಿದ್ದರು. ಈ ಆಟೋ ರೇಸಿಂಗ್ ಸ್ಪರ್ಧೆಯನ್ನು ನೋಡಿದಾಗ ವೃತ್ತಿಪರ ಫಾರ್ಮುಲಾ 1 ರೇಸಿಂಗ್ (Formula F1 race) ನೆನಪಾಗುವ ರೇಂಜ್ ನಲ್ಲಿ ಆಯೋಜಿಸಲಾಗಿದೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.