ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಅವರು ಹೊರ ಹೋಗಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಮನೆಯವರಿಗೆ ಬೇಸರ ಮೂಡಿಸಿದೆ. ಸುದೀಪ್ ಅವರು ವರ್ತೂರು ಸಂತೋಷ್ ಬಳಿ ಪರಿಪರಿಯಾಗಿ ಕೇಳಿಕೊಂಡರೂ ಅವರು ಇದಕ್ಕೆ ಒಪ್ಪುತ್ತಿಲ್ಲ. ವರ್ತೂರು ಸಂತೋಷ್ ಅವರ ಮನ ಒಲಿಸಲು ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಸುಷ್ಮಾ ರಾವ್ ಆಗಮಿಸಿದ್ದಾರೆ. ತುಕಾಲಿ ಸಂತೋಷ್ ಅವರು ವರ್ತೂರು ಬಳಿ ಹೋಗಿ ‘ಅಣ್ಣಾ ನಿನ್ನ ಕಾಲಿಗೆ ಬೀಳ್ತೀನಿ, ಇಲ್ಲೇ ಉಳಿದುಕೊಳ್ಳಿ’ ಎಂದು ಕೋರಿದ್ದಾರೆ. ಇದಕ್ಕೆ ವರ್ತೂರು ಅವರು ಒಪ್ಪಲೇ ಇಲ್ಲ.