ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಛಾತ್ ಪೂಜೆಗಾಗಿ ಯಮುನಾ ನದಿಯಲ್ಲಿ ಸ್ನಾನ ಮಾಡುವ ವೇಳೆ ಮಹಿಳೆಯರು ಯಮುನಾ ನದಿಯ ವಿಷಪೂರಿತ ನೊರೆಯಲ್ಲೇ ಸ್ನಾನ ಮಾಡಿದ್ದಾರೆ. ನದಿಯ ನೀರು ಈ ಪರಿ ಕಲುಷಿತವಾಗಿರುವುದನ್ನು ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.