ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತ 15 ಕಡೆ ಕಾಡುಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ ಸ್ಫೋಟಕ ಪತ್ತೆಯಾಗಿದೆ. ವಿಚಾರ ತಿಳಿದು ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಯಿಂದ ಅರಣ್ಯ ಇಲಾಖೆಯ ಪರಿಣಿತರ ತಂಡ ಆಗಮಿಸಿ ಸ್ಫೋಟಕ ವಶಪಡಿಸಿಕೊಂಡಿದೆ.