ಉಡುಪಿ ಕಾಲೇಜ್ ವಿದ್ಯಾರ್ಥಿನಿಯರ ವಿಡಿಯೋ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಕುಟುಂಬದ ವಿರುದ್ಧ ಟ್ವಿಟ್ ಮಾಡಿದ್ದ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಹಸಂಚಾಲಕಿ ಶಕುಂತಲಾ ನಟರಾಜ್ರನ್ನು ನಿನ್ನೆ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಇದೀಗ ಟಿವಿ9 ಜತೆ ಮಾತನಾಡಿದ ಅವರು, ಮನೆಗೆ ಬಂದು ಏಕಾಏಕಿ ನನ್ನನ್ನು ಪೊಲೀಸರು ಕರದುಕೊಂಡು ಹೋದರು. ಫೋನ್ ಕಸಿದುಕೊಂಡು ಅಪರಾಧಿ ರೀತಿಯಲ್ಲಿ ನಡೆಸಿಕೊಂಡರು ಎಂದು ಆರೋಪಿಸಿದ್ದಾರೆ.