ನಮ್ಮ ಕೊಪ್ಪಳ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಹನುಮಮಾಲೆ ವಿಸರ್ಜನೆ ದಿವಾಗಿರುವ ಇಂದು ಮಾಲೆ ಧರಿಸಿರುವ ಕೊಪ್ಪಳ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಭಕ್ತರು ಬೆಳಗಿನ ಜಾವದಿಂದಲೇ ಅಂಜನಾದಿ ಬೆಟ್ಟಕ್ಕೆ ಅಗಮಿಸಿ ಮಾಲೆ ವಿಸರ್ಜನೆ ಮಾಡಿದರು. ಮಾಲೆ ಧರಿಸುವ ಭಕ್ತರು ಬರಿಮೈಯಲ್ಲಿ ಪೂಜೆ ಸಲ್ಲಿಸಿ ಮಾಲೆ ವಿಸರ್ಜನೆ ಮಾಡಬೇಕು. ಬೆಟ್ಟದ ಮೇಲೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಭಕ್ತರು ವ್ರತವನ್ನು ಪೂರೈಸಿದರು.