ಸಿಪಿ ಯೋಗೇಶ್ವರ್ ಚುನಾವಣಾ ಪ್ರಚಾರ

ಕೋಟೆಹೊಲ ಗ್ರಾಮ ಚಿಕ್ಕದು ಮತ್ತು ಇಲ್ಲಿ ಮೂಲಭೂತ ಸೌಕರ್ಯಗಳು ಬರಿಗಣ್ಣಿಗೆ ಗೋಚರಿಸುತ್ತಿಲ್ಲ. ಮಣ್ಣಿನ ರಸ್ತೆಯ ಮೇಲೆ ಜನ ಮತ್ತು ಜನನಾಯಕ ತಿರುಗಾಡುತ್ತಿದ್ದಾರೆ. ಅಶ್ವತ್ಥ ಮರವೊಂದರ ಕೆಳಗೆ ನಿಂತು ಗ್ರಾಮಸ್ಥರನ್ನು ಉದ್ದೇಶಿಸಿ ಮಾತಾಡಿದ ಯೋಗೇಶ್ವರ್ ಹಲವು ಭರವಸೆಗಳನ್ನು ನೀಡಿದರು.