ಈಗಾಗಲೇ ವರದಿಯಾಗಿರುವಂತೆ ಒಕ್ಕಲಿಗ ಸಂಪ್ರದಾಯದ ಹಾಗೆ ನಡೆದ ಅಂತ್ಯಕ್ರಿಯೆಯಲ್ಲಿ 1,000 ಕೇಜಿ ಗಂಧದ ಕಟ್ಟಿಗೆ, ಸುಮಾರು 50 ಕೆಜಿ ತುಪ್ಪ ಬಳಸಲಾಗಿದೆ. ಕೃಷ್ಣ ಅವರ ಹಿರಿಯ ಮೊಮ್ಮಗ ಮತ್ತು ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗಡೆ ತಾತನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ತಮ್ಮ ರಾಜಕೀಯ ಗುರುವಿನ ಎಲ್ಲ ವಿಧಿವಿಧಾನಗಳನ್ನು ಶಿವಕುಮಾರ್ ಅಚ್ಚುಕಟ್ಟಾಗಿ ನಿರ್ವಹಿಸಿದರು.