ಕೆಲವೊಂದು ವಿಷಯಗಳನ್ನು ಅಲ್ಲಲ್ಲಿಗೆ ಮೊಟಕುಗೊಳಿಸಬೇಕು, ಬೆಳೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ ರಮೇಶ್ ಜಾರಕಿಹೊಳಿ, ಹಿಂದೆ ದಿವಂಗತ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಸಿಎಂ ಇಬ್ರಾಹಿಂ ಅವರು ಬಹಳ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು, ಹಿಂದಿನ ರಾಜಕೀಯ ಸುದ್ದಿಗಳನ್ನು ಕೆದಕಿದರೆ ಅವೆಲ್ಲ ಸಿಗುತ್ತವೆ ಎಂದರು.