ಹಿಂದಿ ಹೇರಿಕೆಯನ್ನು ತಮ್ಮ ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ, ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಯಲ್ಲಿದೆ, ಮಾತೃಭಾಷೆ ಕನ್ನಡ ಪ್ರಥಮ ಭಾಷೆಯಾದರೆ ಎರಡನೇ ಭಾಷೆ ಇಂಗ್ಲಿಷ್ ಎಂದು ಸಿದ್ದರಾಮಯ್ಯ ಹೇಳಿದರು. ತೃತೀಯ ಭಾಷೆಯಾಗಿ ಹಿಂದಿಯನ್ನು ಪರಿಗಣಿಸಬಹುದಲ್ಲ ಅಂದಾಗ ಸಿದ್ದರಾಮಯ್ಯ ಚುಟುಕಾಗಿ ತ್ರಿಭಾಷಾ ಸೂತ್ರಕ್ಕೆ ರಾಜ್ಯದಲ್ಲಿ ಅವಕಾಶವಿಲ್ಲವೆಂದು ಹೇಳಿದರು.