ಉತ್ತರ ಪ್ರದೇಶದ ಆಗ್ರಾದಲ್ಲಿ ಪಹಲ್ಗಾಮ್ ದಾಳಿಯ ಕುರಿತು ಭಾರತ ಪ್ರವಾಸದಲ್ಲಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇಂದು ಪ್ರತಿಕ್ರಿಯಿಸಿದ್ದಾರೆ. ಈ ಭೀಕರ ಭಯೋತ್ಪಾದನಾ ದಾಳಿಯಿಂದ ಬಾಧಿತರಾದ ಕಾಶ್ಮೀರದ ಜನರಿಗೆ ನಮ್ಮ ಸಂತಾಪಗಳು. ಅಮೆರಿಕದ ಅಧ್ಯಕ್ಷರು ಈಗಾಗಲೇ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದಾರೆ. ಸರ್ಕಾರ ಮತ್ತು ಭಾರತದ ಜನರಿಗೆ ನಾವು ನಮ್ಮ ಕೈಲಾದ ಸಹಾಯವನ್ನು ನಾವು ನೀಡುತ್ತಿದ್ದೇವೆ ಎಂದಿದ್ದಾರೆ.