ಬೆಂಗಳೂರಿನ ಟೌನ್ ಹಾಲ್​ನಲ್ಲಿ ಜೈ ಹಿಂದ್ ಕಾರ್ಯಕ್ರಮ

ಆರ್ಮಿ ಜಾಕೆಟ್ ಧರಿಸಿದ ಸಿದ್ದರಾಮಯ್ಯ, ಶಿವಕುಮಾರ್, ಸುರ್ಜೆವಾಲ, ವೇಣುಗೋಪಾಲ್ ಮೊದಲಾದವರೆಲ್ಲ ಹೆಮ್ಮೆ ಮತ್ತು ಅಭಿಮಾನದಿಂದ ಬೀಗುತ್ತಿದ್ದರು. ಆ ಜಾಕೆಟ್​ನ ಮಹಿಮೆಯೇ ಅಂಥದ್ದು, ಧರಿಸಿದ ಕೂಡಲೇ ನಾವೂ ಸೈನಿಕರು ಎಂಬ ಭಾವನೆ ಮನದಲ್ಲಿ ಮೂಡಿಬಿಡುತ್ತದೆ. ಹಿಂದೊಮ್ಮೆ ದೇಶಕ್ಕಾಗಿ ತಮ್ಮ ಜೀವವನ್ನು ಒತ್ತೆಯಿಟ್ಟು, ಕುಟುಂಬಗಳಿಂದ ವರ್ಷಗಳವರೆಗೆ ದೂರವಿದ್ದು ದೇಶವನ್ನು ಸುರಕ್ಷಿವಾಗಿಟ್ಟ ಮಾಜಿ ಯೋಧರಿಂದ ಜಾಕೆಟ್ ತೊಡಿಸಿಕೊಳ್ಳುವುದು ಸಾಮಾನ್ಯ ಮಾತೇ?