‘ಅದೆಲ್ಲ ಈಗ ಜೀವನದಲ್ಲಿ ಇಲ್ಲ; ತ್ಯಾಗ ಮಾಡಿದ್ದೇನೆ’: ಮದುವೆ ಬಳಿಕ ವಸಿಷ್ಠ ಸಿಂಹ ಮಾತು

ಮದುವೆ ಬಳಿಕ ಎಲ್ಲರ ಜೀವನದಲ್ಲೂ ಬದಲಾವಣೆ ಆಗುತ್ತದೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಪ್ರೀತಿಸಿ ಮದುವೆ ಆದ ಬಳಿಕ ಅವರ ಜೀವನದಲ್ಲೂ ಕೆಲವು ಬದಲಾವಣೆ ಆಗಿವೆ. ಆ ಬಗ್ಗೆ ವಸಿಷ್ಠ ಸಿಂಹ ಮಾತನಾಡಿದ್ದಾರೆ. ‘ಲವ್​ ಲಿ’ ಸಿನಿಮಾದ ಕುರಿತು ಮಾತುಕಥೆಗೆ ಸಿಕ್ಕಾಗ ವೈಯಕ್ತಿಕ ಜೀವನದ ಬಗ್ಗೆಯೂ ಕೆಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.