ಮೂರನೇ ಅವಧಿಯಲ್ಲಿ ಯುವಕರನ್ನು ಬೆಳೆಸಿ ರಾಜಕೀಯಕ್ಕೆ ವಿದಾಯ ಹೇಳಬೇಕೆಂದುಕೊಂಡಿದ್ದೆ, ಕೊನೆಯವರೆಗೂ ರಾಜಕಾರಣಿಯಾಗಿ ಉಳಿಯುವುದು ತನಗೆ ಇಷ್ಟವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು. ದೇಶಕ್ಕೆ ಮೋದಿ ಜೀ ಅವರು ಬೇಕು, ಹಾಗಾಗಿ ಮೈಸೂರು ಮಹಾರಾಜರಿಗೆ ಟಿಕೆಟ್ ಕೊಟ್ಟರೆ ಎಲ್ಲ ಕಾರ್ಯಕರ್ತರು ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸಬೇಕು, ತಾನಂತೂ ನಿರಾಶನಾಗಲ್ಲ, ಮೊದಲಿನಂತೆಯೇ ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಸಂಸದ ಹೇಳಿದರು.