ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ನಡುವಿನ ಸ್ನೇಹ ಹಳಸಿದೆ. ಮೊದಲು ಕ್ಲೋಸ್ ಆಗಿದ್ದ ಅವರು ಈಗ ಬದ್ಧ ವೈರಿಗಳಂತೆ ವರ್ತಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಒಂದು ಪ್ರಶ್ನೆ ಕೇಳಿದ್ದಾರೆ. ‘ಕೊನೆತನಕ ಇರುವ ಫ್ರೆಂಡ್ಶಿಪ್ ಯಾವುದು? ಇಲ್ಲೇ ಬಿಟ್ಟು ಹೋಗುವ ಫ್ರೆಂಡ್ಶಿಪ್ ಯಾವುದು’ ಎಂದು ಸುದೀಪ್ ಕೇಳಿದ್ದಕ್ಕೆ ಎಲ್ಲರೂ ನೇರ ಉತ್ತರ ನೀಡಿದ್ದಾರೆ. ‘ನನಗೆ ನೋವಾಗುತ್ತದೆ ಎಂಬುದು ಗೊತ್ತಿದ್ದರೂ ಕೂಡ ಕಾರ್ತಿಕ್ ಬಂದು ನೋವು ಮಾಡುತ್ತಾರೆ. ನಮ್ಮ ಫ್ರೆಂಡ್ಶಿಪ್ ಉಳಿದಿಲ್ಲ. ಹೊರಗೆ ಹೋದಮೇಲೆ ಕೂಡ ಅದನ್ನು ಪ್ಯಾಚಪ್ ಮಾಡಿಕೊಳ್ಳಲು ನಾನು ನೋಡಲ್ಲ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಜನವರಿ 14ರಂದು ಈ ಸಂಚಿಕೆ ಪ್ರಸಾರ ಆಗಲಿದೆ. ‘ಕಲರ್ಸ್ ಕನ್ನಡ’ ಜೊತೆ ‘ಜಿಯೋ ಸಿನಿಮಾ’ ಒಟಿಟಿಯಲ್ಲೂ ಉಚಿತವಾಗಿ ಶೋ ನೋಡಬಹುದು.