ದಸರಾ ಮಹೋತ್ಸವ-2024; ಸಿದ್ದರಾಮಯ್ಯ ಸಭೆ

ಏತನ್ಮಧ್ಯೆ,  ಸರ್ಕಾರದ ಉದ್ದೇಶಿತ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಹಿಂದಿನ ಮೈಸೂರು ಒಡೆಯರ್ ಅರಸೊತ್ತಿಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ. ಇಂದು ಮೈಸೂರು ಅರಮನೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ರಾಜಮಾತೆ ಪ್ರಮೋದಾ ದೇವಿಯವರು, ದಾಖಲೆಗಳ ಪ್ರಕಾರ ಚಾಮುಂಡೇಶ್ವರಿ ದೇವಸ್ಥಾನ ಒಡಯರ್ ಅರಸೊತ್ತಿಗೆಗೆ ಸೇರಿದ ಆಸ್ತಿಯಾಗಿದೆ, ಒಡೆಯರ್ ಮನೆತನವೇ ಅದರ ನಿರ್ವಹಣೆ ಮಾಡಲು ತಯಾರಿದೆ ಎಂದು ಹೇಳಿದರು.