ಮೈಸೂರು ಮೃಗಾಲಯದಲ್ಲಿ ಸಿಂಹದ ಮರಿಗಳಿಗೆ ನಾಮಕರಣ

ಮೈಸೂರು ಮೃಗಾಲಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ್ದಾರೆ. ಮೈಸೂರು ಮೃಗಾಲಯದಲ್ಲಿನ ಸಿಂಹದ ಮರಿಗಳಿಗೆ ನಾಮಕರಣ ಮಾಡಲಾಗಿದ್ದು, ಮೂರು ಮರಿಗಳಿಗೆ ಸೂರ್ಯ, ಚಂದ್ರ, ಕಬಿನಿ ಎಂದು ಹೆಸರಿಡಲಾಗಿದೆ. ಕಾರ್ಯಕ್ರಮದಲ್ಲಿ ಮೃಗಾಲಯ ಅಧಿಕಾರಿಗಳು ಸೇರಿ ಹಲವರು ಭಾಗಿಯಾಗಿದ್ದು, ಮೈಸೂರು ಮೃಗಲಯದಲ್ಲಿ ಗಂಡು ಸಿಂಹ ರಾಜು ಮತ್ತು ಹೆಣ್ಣು ಸಿಂಹ ನಿರ್ಭಯಗೆ ಜನಿಸಿದ್ದ 3 ಮರಿಗಳು ಇವಾಗಿವೆ.