ಪ್ಲೀಸ್ ನನ್ನ ಮಗುವನ್ನು ಕಾಪಾಡಿ ಎಂದು ದೀನವಾಗಿ ಬೇಡಿದ ತಾಯಿ ಕೋತಿ

ಮರಿ ಕೋತಿಗೆ ಅಪಘಾತವಾಗಿರುವುದನ್ನು ಕಂಡು ತಾಯಿ ಕೋತಿ ಮಮ್ಮಲ ಮರುಗಿದ ಮನಕಲಕುವ ದೃಶ್ಯವೊಂದು ತುಮಕೂರು ನಗರದಲ್ಲಿ ಕಂಡುಬಂದಿದೆ. ನಗರದ ಹನುಮಂತಪುರ ಬಳಿಯ ಜ್ಯೋತಿಪುರದಲ್ಲಿ ಮರಿ ಕೋತಿ ರಸ್ತೆ ದಾಟುತ್ತಿರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾಲು ಮುರಿದಿದೆ. ತನ್ನ ಮಗುವಿನ ಆಕ್ರಂದನ ಕೇಳಿದ ತಾಯಿ ಕೋತಿ ತಕ್ಷಣ ಓಡಿ ಬಂದು ಮರಿಯನ್ನು ರಸ್ತೆಯಿಂದ ಪಕ್ಕಕ್ಕೆ ಎಳೆದುಕೊಂಡು ಹೋಗಿದೆ. ತನ್ನ ಮುದ್ದುಕಂದನ ಮೈ ಕೈ ಸವರಿ ಆರೈಕೆ ಮಾಡಿದೆ. ಮುತ್ತನ್ನಿಟ್ಟು ಸಂತೈಸಿದೆ.