ಥೈಲ್ಯಾಂಡ್ನ ಬ್ಯಾಂಕಾಕ್‌ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಾರ್ಥನೆಯ ಪಠಣದೊಂದಿಗೆ ಸ್ವಾಗತಿಸಿತು. ಇದು ಎರಡೂ ದೇಶಗಳ ನಡುವೆ ಬೇರೂರಿರುವ ಸಾಂಸ್ಕೃತಿಕ ಬಾಂಧವ್ಯವನ್ನು ತೋರಿಸುತ್ತದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ಲೆಂಡ್ ಪ್ರಧಾನಿ 'ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್' ಅನ್ನು ಉಡುಗೊರೆಯಾಗಿ ನೀಡಿದರು. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜತಾಂತ್ರಿಕತೆಯ ಮಹತ್ವದ ಕ್ಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು "ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್" ಪ್ರದಾನ ಮಾಡಿದರು.