ಸ್ಪಂದನಾ ಅವರ ಅಂತ್ಯಸಂಸ್ಕಾರ ನೆರವೇರಿ ಇಂದಿಗೆ (ಆಗಸ್ಟ್ 11) ಮೂರು ದಿನ ಕಳೆದಿದೆ. ಅವರಿಲ್ಲ ಎಂಬ ಸತ್ಯವನ್ನು ಕುಟುಂಬದವರ ಬಳಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ನೋವಿನಲ್ಲಿ ಕುಟುಂಬದವರು ಸ್ಪಂದನಾ ಸಮಾಧಿಗೆ ಪೂಜೆ ಮಾಡಿದ್ದಾರೆ. ಅವರಿಷ್ಟದ ತಿಂಡಿ-ತಿನಿಸುಗಳನ್ನು ಸಮಾಧಿ ಎದುರು ಇಡಲಾಗಿದೆ. ಪೂಜೆ ಬಳಿಕ ಕುಟುಂಬ ಶ್ರೀರಂಗಪಟ್ಟಣಕ್ಕೆ ತೆರಳಲಿದೆ. ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. ಕುಟುಂಬದ 50 ಜನರು ಇಲ್ಲಿಗೆ ತೆರಳಲಿದ್ದಾರೆ. ಬ್ಯಾಂಕಾಕ್ನಲ್ಲಿ ಸ್ಪಂದನಾ ನಿಧನ ಹೊಂದಿದರು. ಅವರಿಗೆ ಹೃದಯಾಘಾತ ಆಗಿತ್ತು.