ದೆಹಲಿಯ ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ

ಉತ್ತರ ಭಾರತದಲ್ಲಿ ಲೋಹ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ಹಿಂದಿನ ದಿನ ಇದನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಲೋಹ್ರಿಯನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನರೈನಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಲೋಹ್ರಿಯ ಪವಿತ್ರ ಬೆಂಕಿಯನ್ನು ಬೆಳಗಿಸಿ, ಅಲ್ಲಿ ವಾಸಿಸುವ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಮಕರ ಸಂಕ್ರಾಂತಿಯ ಮುನ್ನಾದಿನದಂದು ಕುಟುಂಬದವರು ಮತ್ತು ನೆರೆಹೊರೆಯ ಜನರು ರಾತ್ರಿಯಲ್ಲಿ ತೆರೆದ ಸ್ಥಳದಲ್ಲಿ ಬೆಂಕಿಯ ಸುತ್ತಲೂ ವೃತ್ತಾಕಾರದಲ್ಲಿ ಕುಳಿತು ರೇವ್ಡಿ, ಕಡಲೆಕಾಯಿ ಮತ್ತು ಲಾವಾ ಇತ್ಯಾದಿಗಳನ್ನು ತಿನ್ನುವ ಮೂಲಕ ಲೋಹ್ರಿ ಹಬ್ಬವನ್ನು ಆಚರಿಸುತ್ತಾರೆ.