ತಮ್ಮ ಕ್ಷೇತ್ರದಲ್ಲಿ ತಾನು ಪತ್ರ ಕೊಟ್ಟವರಿಗೆ ಮನೆ ಸಿಕ್ಕಿಲ್ಲ ಅದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪತ್ರ ಪಡೆದವರಿಗೆ ಮನೆಗಳು ಸಿಕ್ಕಿವೆ ಎಂದು ಪಾಟೀಲ್ ಹೇಳುತ್ತಾರೆ. ಆಳಂದ್ ಪಕ್ಕದ ಅಫ್ಜಲಪುರ ಕ್ಷೇತ್ರದಲ್ಲಿ ಅವ್ಯವಹಾರ ನಡೆದಿದೆ, ಸುಮಾರು 1,000 ದಷ್ಟು ಮನೆಗಳನ್ನು ಹಣ ಪಡೆದು ಹಂಚಲಾಗಿದೆ, ಇದೊಂದು ಧಂದೆಯಾಗಿಬಿಟ್ಟಿದೆ, ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡಿ ಹೋಗುತ್ತದೆ ಎಂದು ಪಾಟೀಲ್ ಫೋನಲ್ಲಿ ಸರ್ಫ್ರಾಜ್ಗೆ ಹೇಳಿದ್ದಾರೆ.