ನಟಿ ಬೃಂದಾ ಆಚಾರ್ಯ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ‘ಪ್ರೇಮಂ ಪೂಜ್ಯಂ’ ಮೂಲಕ ಗಮನ ಸೆಳೆದಿದ್ದ ಅವರು ಈಗ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಬೃಂದಾ ಕಳೆದೇ ಹೋಗಿದ್ದಾರೆ. ಅವರ ಖುಷಿ ದ್ವಿಗುಣ ಆಗಿದೆ. ‘ನಾನು ಯಾವಾಗಲೂ ನಗುತ್ತಾನೇ ಇರೋದು. ಈ ನಗು ಮತ್ತಷ್ಟು ಜಾಸ್ತಿ ಆಗಿದೆ’ ಎಂದು ಬೃಂದಾ ಹೇಳಿದ್ದಾರೆ.