ಕೆಲವೇ ದಿನಗಳ ಹಿಂದೆ ಅಮಿತಾ ಜಿಂದಾಲ್ ಅವರ ಮೇಲೆ ನಟ ದರ್ಶನ್ ಮನೆಯ ನಾಯಿಗಳು ದಾಳಿ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕೇಸ್ಗೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಇಂದು (ನವೆಂಬರ್ 7) ಮಹಜರು ಮಾಡಿದ್ದಾರೆ. ಅಮಿತಾ ಜಿಂದಾಲ್ ಅವರನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪೂರ್ತಿ ಮಾಹಿತಿ ಪಡೆದಿದ್ದಾರೆ. ಜೊತೆಗೆ, ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಂದು ನಾಯಿ ದಾಳಿಯ ಘಟನೆ ಯಾವ ರೀತಿ ನಡೆಯಿತು ಎಂಬುದನ್ನು ಅಮಿತಾ ಜಿಂದಾಲ್ ಅವರು ಪೊಲೀಸರ ಎದುರು ವಿವರಿಸಿದ್ದಾರೆ. ಸ್ಥಳ ಮಹಜರು ಮಾಡಿದ ವಿಡಿಯೋ ಇಲ್ಲಿದೆ..