ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಗಳವಾರ ಹಾವೇರಿ ಜಿಲ್ಲೆಗೆ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ಕಡೆ ಮಳೆ ಆಗ್ತಿದೆ, ಜೂನ್ ನಲ್ಲಿ ನಮಗೆ ಮಳೆ ಕೈ ಕೊಡ್ತು. ಜುಲೈನಲ್ಲಿ ವಾಡಿಕೆಗಿಂತ ಮಳೆ ಜಾಸ್ತಿಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಆರೇಳು ಜನ ರೈತರು ಸಾವನ್ನಪ್ಪಿದಾರೆ. ಹೀಗಾಗಿ ಹಾವೇರಿ ಜಿಲ್ಲೆಗೆ ಹೋಗ್ತೀದಿನಿ. ಅಲ್ಲಿಂದ ಮಳೆ ಎಲ್ಲಿ ಅಗಿದೆ ಅಲ್ಲಿ ಭೇಟಿ ನೀಡಲಾಗವುದು. ನಾನು ಕೂಡಾ ಮುಂದಿನ ದಿನಗಳಲ್ಲಿ ಉಡುಪಿ ಮಂಗಳೂರು ಕಡೆ ಹೋಗ್ತೀನಿ. ಇವಾಗೆಲ್ಲ ಮಳೆ ಆಗ್ತಿದೆ, ನಾನು ಮೂಡನಂಭಿಕೆ ಮೌಡ್ಯ ನಂಬಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಗಾಲ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ಪ್ರಕೃತಿಯಲ್ಲಿ ಪ್ರವಾಹ, ಮಳೆ ಕೊರತೆ ಸಹಜ ಎಂದ ಸಿದ್ದರಾಮಯ್ಯ ಜಗತ್ತಿನಲ್ಲಿ ಬಹುತೇಕ ಎಲ್ಲ ಕಡೆ ವಾತಾವರಣ ಬದಲಾಗಿದೆ ಎಂದರು.