JDS ದಳಪತಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಫ್ಯಾಮಿಲಿ ಜೊತೆ ವಿದೇಶದಲ್ಲಿ ಫುಲ್ ರೌಂಡ್ಸ್ ಹಾಕಿದ್ದಾರೆ. ಪತ್ನಿ, ಮಗ, ಮೊಮ್ಮಗನ ಜೊತೆ ಐಲ್ಯಾಂಡ್ನಲ್ಲಿ ಕಾಲ ಕಳೆಯುತ್ತಿದ್ದು, ಕುಟುಂಬಸ್ಥರ ಖುಷಿ ಕ್ಷಣಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸಿಂಗಾಪುರದಲ್ಲಿ ಕುಮಾರಸ್ವಾಮಿ ಜೋಡೆತ್ತಿನ ಸರ್ಕಾರ ಕೆಡವಲು ತಂತ್ರ ಮಾಡ್ತಿದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದ್ರೆ ಇದಕ್ಕೆ ತಿರುಗೇಟು ನೀಡಿದ ದಳಪತಿ, ತಾವು ಯುರೋಪ್ ಪ್ರವಾಸದಲ್ಲಿ ಇರೋ ಫೋಟೋಗಳನ್ನ ಹಂಚಿಕೊಂಡಿದ್ರು. ಇದೀಗ ಪತ್ನಿ ಅನಿತಾಕುಮಾರಸ್ವಾಮಿ, ಮೊಮ್ಮಗ, ಸೊಸೆ, ಮಗನ ಜೊತೆಗಿನ ಒಂದೊಂದೇ ವಿಡಿಯೋ, ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.