ಚೈತ್ರಾಗೆ ಕುತಂತ್ರ ಬುದ್ಧಿಯ ರೋಗ ಇದೆ; ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕಿರಿಕ್ ತೆಗೆದ ರಜತ್
ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಹಲವು ಬಾರಿ ಜಗಳ ಮಾಡಿದ್ದಾರೆ. ಆ ಜಗಳ ಈ ವಾರ ಕೂಡ ಮುಂದುವರಿಯುತ್ತಿದೆ. ಚೈತ್ರಾ ಅವರ ಗುಣಗಳನ್ನು ರಜತ್ ಮೊದಲಿನಿಂದಲೂ ಟೀಕಿಸುತ್ತಾ ಬಂದಿದ್ದಾರೆ. ಈಗ ‘ಕಲರ್ಸ್ ಕನ್ನಡ’ ವಾಹಿನಿಯು ಹೊಸ ಪ್ರೋಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ಕೂಡ ಅವರಿಬ್ಬರ ಜಟಾಪಟಿ ಕಾಣಿಸಿದೆ.