ಈ ವರ್ಷ ರಾಜ್ಯದಲ್ಲಿ ಐದು ಕೋಟಿ ಗಿಡ ಬೆಳೆಸುವ ಗುರಿ ಹೊಂದಿದ್ದೇವೆ: ಸಿಎಂ

ಮೈಸೂರಿನಲ್ಲಿ ಆಯೋಜಿಸಿದ್ದ "ಲಕ್ಷ ವೃಕ್ಷ ಯೋಜನಾ" ಕಾರ್ಯಕ್ರಮವನ್ನು ಇಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗುತ್ತಿದೆ. ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಕನಿಷ್ಠ ಶೇ. 30 ಇರಬೇಕಿತ್ತು. ಆದರೆ ಸರಾಸರಿ ಶೇ. 19 ಇದೆ. ಈ ವರ್ಷ ರಾಜ್ಯದಲ್ಲಿ ಐದು ಕೋಟಿ ಗಿಡ ಬೆಳೆಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.