ಜೋಯಲ್ ಪ್ಯಾರಿಸ್ ಎಸೆದ ಓವರ್ನ ಐದನೇ ಎಸೆತವನ್ನು ವಿನ್ಸ್ ನೇರ ಬೌಂಡರಿ ಕಡೆಗೆ ಆಡಿದರು. ದುರಾದೃಷ್ಟವೆಂಬಂತೆ ಅಲ್ಲಿಯೇ ಸೀಗಲ್ ಪಕ್ಷಿಗಳ ದೊಡ್ಡ ಹಿಂಡಿತ್ತು. ಸ್ವಲ್ಪ ಸಮಯ ಗಾಳಿಯಲ್ಲಿದ್ದ ಚೆಂಡು, ಆ ಬಳಿಕ ನೇರವಾಗಿ ಅಲ್ಲಿ ಕುಳಿತಿದ್ದ ಒಂದು ಪಕ್ಷಿಯ ಮೇಲೆ ಬಿದ್ದಿತು. ಚೆಂಡು ಪಕ್ಷಿಗೆ ಬಡಿದ ತಕ್ಷಣ, ಅದರ ಗರಿಗಳು ತುಂಡುಗಳಾಗಿ ಹಾರಿ ನೆಲದ ಮೇಲೆ ಚದುರಿಹೋದವು. ಇದರಿಂದಾಗಿ ಪಕ್ಷಿ ಮೈದಾನದಲ್ಲೇ ಬಿದ್ದು ಒದ್ದಾಡಲಾರಂಭಿಸಿತು.