ವಿರೋಧ ಪಕ್ಷದ ನಾಯಕ ಆರ್ ಅಶೋಕ

ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಸಂಪರ್ಕಿಸುವ ಪ್ರಯತ್ನ ತಾನು ಮಾಡುತ್ತಿರುವುದಾಗಿ ಹೇಳಿದ ಆಶೋಕ ಅವರು, ಅವರಿಗೆ ಕಿರುಕುಳ ನೀಡುವ ಕೆಲಸಕ್ಕೇನಾದರೂ ಪೊಲೀಸರು ಮುಂದಾದರೆ ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ಮಾಡುವುದಾಗಿ ಹೇಳಿದರು. ಮುಸಲ್ಮಾನರ ವಿರುದ್ಧ ನೀಡಿದ ಹೇಳಿಕೆಗೆ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರೂ ಪ್ರಕರಣ ದಾಖಲಾಗಿದೆ ಎಂದು ಅಶೋಕ ಹೇಳಿದರು.